Prasad Udupa Kannada Blogs

Name:
Location: Morrisville, North Carolina, United States

Wednesday, October 21, 2015

Foliage!!




ಹಸಿರೆ ಗಿಣಿಗೆ ಹೆಸರ ತಂತೆ!
ಬೆಳ್ಳ ಬೆಳಕ  ತಿಂಗಳಂತೆ!
ಹೊಳೆವ  ಹಳದಿ ಸ್ನೇಹಕಂತೆ!
ಕೆಂಪು ಹೂವು ಪ್ರೀತಿಗಂತೆ!
ಕಣ್ಣಿಗೇಕೆ ಬಣ್ಣ ಇಷ್ಟವೋ!
ತುಡಿವ ಬಾವವೆಲ್ಲ ಬಣ್ಣಲಿಟ್ಟವೊ!

ಬಣ್ಣದಿಂದೇ ಒಡೆದ ಜಗವು,
ಬಣ್ಣದಲ್ಲೇ ಹಬ್ಬ ಹಲವು,
ಬಣ್ಣ ಸೆಳೆತ ಅನ್ಯ ಗ್ರಹಕೂ!
ಕಣ್ಣ ಹೊರೆತು ಬಣ್ಣ ಮೆರೆದಿತೆ? 
ಬಣ್ಣ ಹೊರೆತು ಬಾವ ಹೊಮ್ಮಿತೆ? 

ಬೆಳ್ಳಿ ಕುರುಳ ಮುಪ್ಪಿನಂತೆ
ಕಣ್ಣ ಸುತ್ತ ಕಪ್ಪಿನಂತೆ  
ಮಾಗಿದ ಈ ಎಲೆಯು ಹೊಳೆಯಿತೋ,
ಜೀವನ ಚಕ್ರವ  ನೆನಸಿತೋ?!
ಇದನೂ ನೋಡಿ ಹೇಗೆ ಹಿಗ್ಗಿತೋ 
ಮನವು ಕಣ್ಣ ನಂಬಿ ತಾನೂ ತಪ್ಪಿತೋ?!j