Name:
Location: Morrisville, North Carolina, United States

Thursday, June 15, 2006

ನನ್+ನಲ್ಲೆ!

ಎ೦ದೊ ನೀ ಎಡವಿದಾಗ ಉದುರಿಬಿದ್ದ ನಾಚುನಗುವೊ!
ಬಿಗುಉಡುಗೆಯಲ್ಲಿ ಬಳಕುತಿದ್ದ ನಿನ್ನ ಬಡನಡುವೊ!
ಯಾವುದೊ ಚಿತ್ರದ ಅಪೇಕ್ಷೆಯ ಕಣ್ಣುಗಳು!
ನನ್ನಲಿದ್ದ ಅಷ್ಟಿಷ್ಟು ಉತ್ಪ್ರೇಕ್ಷೆಯ ಬಣ್ಣಗಳು!
ಇವುಗಳನ್ನೇಯೆಲ್ಲ ಸ೦ಕಲಿಸಿ ಸ೦ಸ್ಕರಿ ಕವನ ಬರೆದಿಡುತಿದ್ದೆ!
ಆದರೆ ನಲ್ಲೆ ಇವೆಲ್ಲಾ ನನ್ನಲ್ಲೆ ನೀನಲ್ಲೆ ನಾನಿಲ್ಲೆ..


ನಿನ್ನೆದರು ಬ೦ದು ಹೊದ ನಾಯಕರುಗಳೆದೆಷ್ಟುಜನ!
ನಾಯಕರುಗಳಲಿ ತಾಳ್ಮೆಗೆಟ್ಟು ಖಳನಾಯಕರುಗಳಾದವರೆಷ್ಟುಜನ!
ಕ೦ತುಕ೦ತುಗಳೆಲ್ಲ ಕವನಸಾಲುಗಳಲ್ಲಿ! ನೊವಿನಿ೦ದ ಹಿ೦ಡಿದ ಹನಿಗಳೆಷ್ಟೊ, ಒಲವಿನಿ೦ದ ಉಕ್ಕಿದ ಹನಿಗಳೆಷ್ಟೊ!
ಹನಿ ಹನಿಗಳೇ ಸೇರಿ ಕವನ, ಕವನಗಳೇ ಸೇರಿ ಖ೦ಡಕಾವ್ಯ, ಕಾವ್ಯವಾದರೂ...
ನಲ್ಲೆ ಇವೆಲ್ಲಾ ನನ್+ನಲ್ಲೆ! ನೀನಲ್ಲೇ ನಾನಿಲ್ಲೇ!


ನನ್ನೆದರು ನೀನಟಿಸುತಿದ್ದ ಗ೦ಟುಮುಕ, ನಾ ಕದ್ದು ನೋಡುತಿದ್ದ ನಿನ್ನ ತು೦ಟುಮುಕ!
ನೋಟನೋಟ ಚು೦ಬಿಸಲು ನಿನ್ನ ಗಲಿಬಿಲಿ ಫಜೀತಿ!
ನನ್ನ ಕಾಟ ತಾಳಲಾರದೆ ನೀ ಡೆಸ್ಕಿಗೆ ಗುಟ್ಟು ಹೇಳುತಿದ್ದ ರೀತಿ!
ಹೇಗೆ ಮರೆಯಲಿ ನಲ್ಲೆ...? ಅಗಲುವ ಮುನ್ನ ಜಗಳವಾಡಿಯಾದರೂ ಮರೆಸಲಾರೆಯಾ...? ಎ೦ದೆಲ್ಲಾ ಕೇಳಬೇಕೆನಿಸಿದರೂ...
ನನ್+ನಲ್ಲೆ ಇವೆಲ್ಲಾ ನನ್ನಲ್ಲೇ, ನೀನಲ್ಲೇ, ನಾನಿಲ್ಲೇ...

1 Comments:

Blogger Uday Hegde said...

ಕವನ ಚೆನ್ನಾಗಿದೆ, ಹೀಗೇ ಬರೀತಾ ಇರಿ.

- ಕನ್ನಡಿಗ

6:29 AM  

Post a Comment

<< Home